ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!

ಲೇಖಕರು :
ವಿಲಾಸ್ ಕುಮಾರ್ ನಿಟ್ಟೆ, ಕಾರ್ಕಳ
ಸೋಮವಾರ, ಫೆಬ್ರವರಿ 2 , 2015
ಫೆಬ್ರವರಿ 2, 2015

ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!

ಕಾರ್ಕಳ : ಈ ಬಾರಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!

ಕರಾವಳಿಯ ಗಂಡುಕಲೆ ಎಂದೆನಿಸಿದ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಕಾರ್ಕಳದಲ್ಲಿ ಸಮಾನ ಮನಸ್ಕರಿಂದ ಹುಟ್ಟಿಕೊಂಡ ಸಂಸ್ಥೆ 'ಯಕ್ಷ ಕಲಾರಂಗ' ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಇದೀಗ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಮಾಡಿಸಲು ಹೊರಟಿದೆ.

ಕಾರ್ಕಳ ತಾಲೂಕಿನ ಪ್ರಾಥಮಿಕ, ಪ್ರೌಢ ಮತ್ತು ಪ್ರಥಮದರ್ಜೆ ಕಾಲೇಜು ಸೇರಿದಂತೆ ಒಟ್ಟು 12 ಶಾಲೆ- ಕಾಲೇಜುಗಳನ್ನು ಆಯ್ಕೆ ಮಾಡಿದ್ದು, 240 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಸಂಸ್ಥೆಯ ವತಿಯಿಂದ ಕಾರ್ಕಳ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇರೆ ಬೇರೆ ಯಕ್ಷಗಾನ ಗುರುಗಳಿಂದ ತರಬೇತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಆಸಕ್ತಿಯಿರುವ ಸುಮಾರು 240 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ, ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದ ಕಲಾವಿದರನ್ನು ಸಷ್ಟಿಸುವ ನೆಲೆಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ವಾರ್ಷಿಕ 2 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ.

ಧರ್ಮರಾಜ ಕಂಬಳಿ, ಅಜಿತ್ ಕುಮಾರ್ ಜೈನ್, ಸತೀಶ್ ಮಡಿವಾಳ, ಆನಂದ ಗುಡಿಗಾರ್, ಗಣೇಶ್ ಶೆಟ್ಟಿ ಮತ್ತು ಮಹಾವೀರ ಪಾಂಡಿ ಯಕ್ಷಗುರುಗಳಾಗಿ ಸಹಕರಿಸುತ್ತಿದ್ದಾರೆ. ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷರಾಗಿ ಗೋಪಾಲಕಷ್ಣ ಶೆಟ್ಟಿ, ಗೌರವಾಧ್ಯಕ್ಷರಾಗಿ ಡಾ.ಸಿ.ಪಿ.ಅಕಾರಿ, ಸಂಚಾಲಕರಾಗಿ ಬಿ.ಪದ್ಮನಾಭ ಹಾಗೂ ಇನ್ನಿತರ ಪದಾಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕಿಶೋರ ಯಕ್ಷೋತ್ಸವ : ಯಕ್ಷ ಕಲಾರಂಗ ಕಾರ್ಕಳ ಇವರಿಂದ ವಿಕಾಸ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಿಶೋರ ಯಕ್ಷೋತ್ಸವ-2015 ಕಾರ್ಕಳದ ಅನಂತಶಯನದ ಬಳಿಯಿರುವ ಕಸ್ತೂರಿ ರಂಗ ಮಂಟಪದಲ್ಲಿ ಫೆ.6, 7, 8ರಂದು ಆಯೋಜಿಸಲಾಗಿದೆ. ಈ ಮೂರು ದಿನಗಳಲ್ಲಿ ನಾನಾ ಶಾಲೆಗಳ ತಂಡಗಳಿಂದ 10 ಪ್ರಸಂಗಗಳ ಪ್ರದರ್ಶನವಿದೆ. ಫೆ. 8ರಂದು ಸಂಜೆ 5.45ರಿಂದ ಸಮಾರೋಪ ಸಮಾರಂಭ ನಡೆಯಲಿದೆ.

''ಯಕ್ಷಗಾನ ಕಲಾಭಿಮಾನಿಗಳ ಸಹಕಾರ ಹಾಗೂ ಯಕ್ಷ ಕಲಾರಂಗದ ಪದಾಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುವುದರಿಂದ ಈ ಯಶಸ್ಸು ಸಾಧ್ಯವಾಗಿದೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಪ್ರಯತ್ನ ನಮ್ಮದು. ವಿದ್ಯಾರ್ಥಿ ಜೀವನದಲ್ಲೇ ಆಸಕ್ತಿ ಬರುವಂತಹ ಕಾರ್ಯ ಆರಂಭಿಸಿದ್ದೇವೆ.`` - ಗೋಪಾಲಕಷ್ಣ ಶೆಟ್ಟಿ ಕುಕ್ಕುಂದೂರು , ಯಕ್ಷ ಕಲಾರಂಗದ ಅಧ್ಯಕ್ಷ



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ